Kannada Shaale

Shaale Registration Closed (Contact Bkkshaaley@gmail.com for enquiry)

Th admissions are now closed  for the academic year 2023-2024 at our Kannada shaale. 

Shaale provides a wonderful opportunity for your children to immerse themselves in the rich heritage and cultural significance of the Kannada language.

If you are still interested to apply for admission, please reach out to Administrators by emailing Bkkshaaley@gmail.com with your details.

We encourage you to take advantage of this unique opportunity to give your child a valuable linguistic and cultural experience that will benefit them throughout their lives.

Shaale Yearly Registration Fee $45/student (+$10/- Late registration fee after August 20th 2023)

Buy Kannada Shaale books only at $15/book

ನ್ಯೂ ಜೆರ್ಸಿ ಬೃಂದಾವನ ಕನ್ನಡ ಕೂಟವು, ನಮ್ಮ ಮಕ್ಕಳಿಗೆ ಕನ್ನಡ ಕಲಿಸಿ, ಬೆಳೆಸುವ ದಿಸೆಯಲ್ಲಿ ೨೦೧೫ ರಲ್ಲಿ “ಬೃಂದಾವನ ಕನ್ನಡ ಕಲಿಸೋಣ” ವನ್ನು ಪ್ರಾರಂಭಿಸಿತು. ಚಿಣ್ಣರಲ್ಲಿ ಮತ್ತು ಯುವಜನರಲ್ಲಿ ಕನ್ನಡ ಭಾಷೆಯ ಕುರಿತು ಅಭಿಮಾನ ಮತ್ತು ಆಸಕ್ತಿಯನ್ನು ಹೆಚ್ಚಿಸಿ ಕನ್ನಡದಲ್ಲಿ ಮಾತನಾಡಲು, ಓದಿ ಬರೆಯಲು ಸಜ್ಜುಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಬೃಂದಾವನ ಕನ್ನಡ ಕೂಟ ಹಾಗೂ ಬೃಂದಾವನೇತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ನೀಡಲು ಹಾಗೂ ಕನ್ನಡ ಮಾತನಾಡಲು ಪ್ರೋತ್ಸಾಹಿಸಲಾಗುತ್ತದೆ.

ಹೊರದೇಶದಲ್ಲಿ ನೆಲೆಸಿರುವ ಕನ್ನಡಿಗರಿಗೆ ಮತ್ತು ಕನ್ನಡ ಕಲಿಯುವ ಆಸಕ್ತರಿಗಾಗಿ, ಕನ್ನಡ ಅಕ್ಯಾಡೆಮಿಯು, ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಎಂಟು ಹಂತಗಳ “ಕನ್ನಡ ಕಲಿಸೋಣ” ಎಂಬ ಪಠ್ಯಕ್ರಮವನ್ನು ಅಭಿವೃದ್ಧಿಗೊಳಿಸಿದೆ. ಈ ಪಠ್ಯಕ್ರಮವನ್ನು ಬೃಂದಾವನ ಕನ್ನಡ ಶಾಲೆಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಅಕ್ಷರಾಭ್ಯಾಸದಿಂದ ಪ್ರಾರಂಭಿಸಿ, ಶಬ್ದ, ವಾಕ್ಯ, ಗದ್ಯ ಬರೆಯಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.

ನಿಮ್ಮೆಲ್ಲರ ಸಹಕಾರದೊಂದಿಗೆ ಸೌತ್ ಬ್ರನ್ಸ್ವಿಕ್, ಈಸ್ಟ್ ವಿಂಡ್ಸರ್, ಎಡಿಸನ್, ಹಿಲ್ಸ್ಬೋರೋ, ಮಾರ್ಲ್ಬೋರೋ, ನಾರ್ತ್ ಜೆರ್ಸಿ, ಸೌತ್ ಜೆರ್ಸಿ ಸೇರಿದಂತೆ, ನ್ಯೂ ಜೆರ್ಸಿಯ ಏಳು ನಿಗದಿತ ಕಲಿಕಾ ಕೇಂದ್ರಗಳಲ್ಲಿ ಕನ್ನಡ ಕಲಿಸೋಣ ಕಾರ್ಯಕ್ರಮವು ನಡೆಯುತ್ತಿದೆ.

ಬನ್ನಿ, ಈ ಅಭಿಯಾನದಲ್ಲಿ ನಮ್ಮ ಜೊತೆ ಕೈ ಗೂಡಿಸಿ!