Brindavana

Karnataka Cultural Organization – Brindavana (KCOB) is a non-profit cultural charitable organization with the status 501(C)(3), representing people originating from Karnataka (a state in India – home to the Silicon Valley of India – Bengaluru) or exhibiting an interest in the language of Kannada and the traditions and culture of Karnataka, dedicated towards upholding the vision and objectives as outlined in the KCOB Brindavana Constitution.

If you are not a member, we request to become member today and join hands with us!

Proclamation - Rajyotsava Day

East Windsor official proclamation :
November 1st as Kannada Language and Rajyotsava Day

ನಮಸ್ಕಾರ,
ನಮ್ಮ ನ್ಯೂ ಜೆರ್ಸಿಯ ಕನ್ನಡ ಬಂಧುಗಳೊಂದಿಗೆ ಒಂದು ಅಪೂರ್ವವಾದ ಸಿಹಿ ಸುದ್ದಿಯನ್ನು ಹಂಚಿಕೊಳ್ಳಲು ನಮಗೆ ಬಹಳ ಹೆಮ್ಮೆಯಾಗುತ್ತದೆ. ಸದ್ಯದಲ್ಲೇ ಬರುವ ಕನ್ನಡ ರಾಜ್ಯೋತ್ಸವದ ದಿನ ಕನ್ನಡಾಂಬೆ ಮಾಮೂಲಿಗಿಂತ ಸ್ವಲ್ಪ ಹೆಚ್ಚು ಖುಷಿಯಾಗುವುದು ಖಂಡಿತ!!

*ನ್ಯೂ ಜೆರ್ಸಿಯ ಈಸ್ಟ್ ವಿಂಡ್ಸರ್ ಜಿಲ್ಲೆಯು ನವಂಬರ್ 1 ನೇ ತಾರೀಖನ್ನು “ಕನ್ನಡ ಭಾಷಾ ಮತ್ತು ರಾಜ್ಯೋತ್ಸವದ ದಿನ “ ಎಂದು ಅಧಿಕೃತವಾಗಿ ಘೋಷಿಸಿದೆ!!*

All New Jersey Kannadigas must be proud to know that the township of East Windsor has *officially proclaimed November 1st as Kannada Language and Rajyotsava Day*
The official ceremony happened last evening in the Mayor’s office in East Windsor.
We express our sincere thanks to Mayor Janice S. Miranov for this recognition given to the Kannada community.

It’s no coincidence that this first-of-its-kind recognition came in East Windsor. Brindavana (KCOB) is registered as a Non Profit 501 (c) 3 Organization in East Windsor Township and hence this Proclamation is from East Windsor Mayor.

Brindavana will strive to replicate this success in other districts as well as at the state level.

ಡುಂಡಿರಾಜ್ ಅವರು ಹೇಳಿದಂತೆ,
*ಸಿರಿಗನ್ನಡಂ ಗೆಲ್ಗೆ! ಅಮೇರಿಗನ್ನಡಂ ಬಾಳ್ಗೆ!!*

– ಅಪೂರ್ವ ತಂಡ, ಬೃಂದಾವನ ನ್ಯೂ ಜೆರ್ಸಿ

Rajyotsava Wishes from Governor

Rajyotsava Wishesh from NJ Governor and Mayors

ನಮಸ್ಕಾರ,
ಎಲ್ಲರಿಗು ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಈ ವರ್ಷದ ಕನ್ನಡ ರಾಜ್ಯೋತ್ಸವ ನ್ಯೂ ಜೆರ್ಸಿಯಲ್ಲಿ ಬಹಳ ವಿಶೇಷವಾದದ್ದು!!

*ನ್ಯೂ ಜೆರ್ಸಿ ರಾಜ್ಯಪಾಲರಾದ ಫಿಲಿಪ್ ಡಿ. ಮರ್ಫಿ* ಅವರು ರಾಜ್ಯೋತ್ಸವವನ್ನು ಆಚರಿಸುವುದರ ಬಗ್ಗೆ ಅಧಿಕೃತ ಪತ್ರದಲ್ಲಿ ಪ್ರಕಟಿಸಿರುವ ವರ್ಷ.

*ನ್ಯೂ ಜೆರ್ಸಿ ಸಭಾಪ್ರತಿನಿಧಿ ಟೆನಿಲ್ ಆರ್. ಮೆಕಾಯ್, ಕನ್ನಡ ರಾಜ್ಯೋತ್ಸವದ ಬಗ್ಗೆ ನಿರ್ಣಯ ಪತ್ರ* ನೀಡಿದ ವರ್ಷ.

*US Congress ಪ್ರತಿನಿಧಿ, US Senate ಅಭ್ಯರ್ಥಿ ಆಂಡಿ ಕಿಮ್,* ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ ವರ್ಷ.

ನವಂಬರ್ ೧ನೇ ತಾರೀಖನ್ನು *ಕನ್ನಡ ಭಾಷೆ ಹಾಗು ರಾಜ್ಯೋತ್ಸವ ದಿನ ಎಂದು ಎರಡು ನ್ಯೂ ಜೆರ್ಸಿ ಜಿಲ್ಲೆಗಳು – ಈಸ್ಟ್ ವಿಂಡ್ಸರ್ ಮತ್ತು ಎಡಿಸನ್* – ಘೋಷಿಸಿದ ವರ್ಷ.

ಬೃಂದಾವನ ಕನ್ನಡ ಕೂಟದ, *ಇಪ್ಪತ್ತನೇ ಹುಟ್ಟುಹಬ್ಬ, ವಿಂಶತಿ ವೈಭವದ* ವರ್ಷ.

ಈ ಯಶಸ್ವಿಯ ಮೈಲಿಗಲ್ಲುಗಳಿಗೆ ಕಾರಣರಾದ
ಸ್ಥಳೀಯ ಕನ್ನಡ ಪ್ರೇಮಿಗಳಿಗೆ, ಬೃಂದಾವನ ಅಭಿಮಾನಿಗಳಿಗೆ ಹೃದ್ಪೂರ್ವಕ ಅಭಿನಂದನೆಗಳು.

ಹೀಗೆ ಇನ್ನೂ ಹೆಚ್ಚು ಕನ್ನಡದ ಕಂಪು ಮತ್ತು ಪ್ರಭಾವ ನ್ಯೂ ಜೆರ್ಸಿಯ ಜಿಲ್ಲೆ-ಜಿಲ್ಲೆಗಳಲ್ಲಿ ಹರಡಲಿ ಎಂದು ಆಶಿಸೋಣ ಮತ್ತು ಅದರ ನಿಟ್ಟಿನಲ್ಲಿ ಶ್ರಮಿಸೋಣ.

ಸಿರಿಕನ್ನಡಂ ಗೆಲ್ಗೆ ಅಮೇರಿಗನ್ನಡಂ ಬಾಳ್ಗೆ

– ಅಪೂರ್ವ ತಂಡ, ಬೃಂದಾವನ ನ್ಯೂ ಜೆರ್ಸಿ

Andy Kim - Kannada Rajyothsava Message

Andy Kim is a prominent American politician serving as the U.S. Representative for New Jersey's 3rd Congressional District since 2019. A member of the Democratic Party, he represents a district that includes parts of Burlington County, Ocean County, and parts of Mercer County.
We are proud and honored to have Congressman Andy Kim's support for the Indian community, and we deeply appreciate his recognition of the vibrant and culturally rich Kannada community. His acknowledgment of our contributions not only highlights the diversity within our society but also strengthens the bond between communities and leadership. We look forward to continuing our collaboration to celebrate and advance our shared values and cultural heritage.

About Us

Tradition

Culture

Festivals

Community

Music

ತಾಯ್ನಾಡಿನಿಂದ ಸಾವಿರಾರು ಮೈಲಿ ದೂರ ಬಂದು ನ್ಯೂ ಜೆರ್ಸಿಯಲ್ಲಿ ನೆಲೆಸಿರುವಂತಹ ಎಲ್ಲಾ ಕನ್ನಡ ಬಂಧುಗಳನ್ನು ಕನ್ನಡ ಭಾಷೆಯ ಬಾಂಧವ್ಯದಲ್ಲಿ ಬೆಸೆಯುವ ನಿಟ್ಟಿನಲ್ಲಿ 2004ರಲ್ಲಿ ಪ್ರಾರಂಭವಾಗಿ ಸತತವಾಗಿ ಕಾರ್ಯನಿರ್ವಹಿಸುತ್ತಿರುವ ಲಾಭರಹಿತ ಸಾಂಸ್ಕೃತಿಕ ದತ್ತಿ ಸಂಸ್ಥೆ – “ಸುಮಧುರ ಸ್ನೇಹ ಸಮ್ಮಿಲನ ನಮ್ಮೀ ಬೃಂದಾವನ” ಕನ್ನಡ ಕೂಟ.

ಉತ್ಸಾಹಿ ಸ್ವಯಂಸೇವಕರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕೂಟವು, ನಮ್ಮ ಪರಂಪರೆ, ಆಚಾರ-ವಿಚಾರಗಳನ್ನು, ಸoಸ್ಕೃತಿಯನ್ನು ಉಳಿಸಿ-ಬೆಳೆಸುವ ಸಕಾರಾತ್ಮಕ ಪ್ರಯತ್ನಗಳನ್ನು ಅನುದಿನವೂ ನಡೆಸುತ್ತಿದೆ. ಸ್ಥಳೀಯ ಮತ್ತು ಕರುನಾಡಿನ ಕಲಾವಿದರನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯಲ್ಲಿ ಪ್ರೋತ್ಸಾಹಿಸುವುದರ ಜೊತೆಗೆ ಕನ್ನಡ ಸಾಹಿತ್ಯ, ಕನ್ನಡ ಶಾಲೆ, ಆರೋಗ್ಯ, ಚಾರಿಟಿ, ಯುವ ಮುಂತಾದ ಹಲವಾರು ವಿವಿಧ ಚಟುವಟಿಕಗಳು ವರ್ಷ ಪೂರ್ತಿ ನಡೆಯಲ್ಪಡುತ್ತವೆ.

ನೀವು ಈಗಾಗಲೇ ನಮ್ಮ ಸಂಸ್ಥೆಯ ಸದಸ್ಯರಾಗಿ ನೋಂದಾಯಿತರಾಗಿರದಿದ್ದಲ್ಲಿ ದಯವಿಟ್ಟು ಸದಸ್ಯರಾಗುವಂತೆ ಈ ಮೂಲಕ ಕೋರುತ್ತೇವೆ. ವಾರ್ಷಿಕ/ದ್ವೈವಾರ್ಷಿಕ-ಆಜೀವ ಮತ್ತು ವಿದ್ಯಾರ್ಥಿ ಸದಸ್ಯತ್ವಗಳು ಲಭ್ಯ.

Brindavana Kannada Koota has been approved as an official Certifying Organization for the Prestigious President’s Volunteer Service Award

Yuva Brindavana

Yuva Brindavana

Do you like meeting and making new friends? Want ample networking opportunities with professionals in various fields? Do you want to showcase your talent or volunteer for the causes that are close to your heart? Come join us at Yuva Brindavana.

Write to us at  yuva@brindavana.org

Silver Sponsor

Bronze Sponsor

Outreach Partners