ಕರ್ನಾಟಕದ ಐತಿಹಾಸಕ ಗಣಿಯಾದ ಸಾಹಿತ್ಯ, ಸಂಸ್ಕೃತಿ ಹಾಗು ಕಲೆಗಳ ಸಮಿಶ್ರ ಸಮ್ಮಿಲನವೇ ಬೃಂದಾವನದ ಸಾಹಿತ್ಯ ಬೃಂದಾವನ. 2014 ರಲ್ಲಿ ಸಾಹಿತ್ಯಾಸಕ್ತರ ಕರೆಗೆ ಓಗೊಟ್ಟು “ಪುಸ್ತಕಗಳ ವಿನಿಮಯ” ಉದ್ದೇಶಕ್ಕಾಗಿ ಪ್ರಾರಂಭವಾದ ಬೃಂದಾವನದ ಗುಂಪು ಮುಂದೆ ಸಾಹಿತ್ಯಾಸಕ್ತರ “ಅಕ್ಷರ ಭಂಡಾರ”, “ಬೃಂದಾವನ ವಾಣಿ”, “ವನವಾಣಿ” ಹಾಗು “ಕನ್ನಡ ಶಾಲೆ” ಗಳಿಗೆ ಪಸರಿಸಿದೆ.
ಸಾಹಿತ್ಯ ಬೃಂದಾವನದಿಂದ ಹಲವಾರು ಕಾರ್ಯಕ್ರಮಗಳು ನ್ಯೂ ಜೆರ್ಸಿಯ ಸಾಹಿತ್ಯಾಸಕ್ತರ ಗಮನ ಸೆಳೆದಿದಲ್ಲದೆ, ಹಲವಾರು ಹೊಸ ಪುಸ್ತಕಗಳ ಪರಿಚಯ, ಹೊಸ ಲೇಖಕರ ಸಂಬಂಧಗಳನ್ನು ಬೆಸೆಯಲು ಅನುಕೂಲ ಮಾಡಿ ಕೊಟ್ಟಿದೆ. ಸಾಹಿತ್ಯ ಬೃಂದಾವನದಿಂದ ಮೊದಲ ಕಾರ್ಯಕ್ರಮ ಶ್ರೀ ಮೈ. ಶ್ರೀ. ನಟರಾಜ್, ಶ್ರೀ ಶ್ರೀವತ್ಸ ಜೋಶಿ ಅವರ ಅಧ್ಯಕ್ಷತೆಯಲ್ಲಿ 2015ರಲ್ಲಿ ನಡೆಯಿತು, ಕಾವ್ಯ ವಾಚನ, ಕನ್ನಡಕ್ಕೆ ತರ್ಜುಮೆ ಮಾಡಿದ ಇಂಗ್ಲೀಷ್ ಕವನದ ತೀರ್ಪುಗಾರರಾಗಿ ನಡೆಸಿದ ಮೊದಲ ಕಾರ್ಯಕ್ರಮ ಮುಂದಿನ ಹಲವಾರು ಉತ್ತಮ ಕಾರ್ಯಕ್ರಮಗಳಿಗೆ ನಾಂದಿಯಾಯಿತು.
ಸಾಹಿತ್ಯ ಬೃಂದಾವನ ನಡೆಸಿಕೊಟ್ಟಿರುವ ಕೆಲವು ಮುಖ್ಯ ಕಾರ್ಯಕ್ರಮಗಳು: