ಬೃಂದಾವನ ವಸಂತೋತ್ಸವ - 2017

ನ್ಯೂ ಜೆರ್ಸಿ ಕನ್ನಡಿಗರಿಗೆಲ್ಲ ಬೃಂದಾವನ ಅಭಿಮಾನಿ ತಂಡದ ಪ್ರೀತಿಯ ನಮಸ್ಕಾರಗಳು,
ವಾಹ್!! ಎಂತಹ ಸುಂದರ ಮರೆಯಲಾಗದ ಯುಗಾದಿ ಹಬ್ಬ... ಕಳೆದ ಭಾನುವಾರ ಏಪ್ರಿಲ್ ೮ ರಂದು ಬೃಂದಾವನ ಕನ್ನಡ ಕೂಟದ ಅಭಿಮಾನಿ ತಂಡ ಏರ್ಪಡಿಸಿದ್ದ ವಸಂತೋತ್ಸವ ಕಾರ್ಯಕ್ರಮದ ಯಶಸ್ಸನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅತ್ಯಂತ ಹರ್ಷವೆನಿಸುತ್ತಿದೆ....ಹೈಸ್ಟೌನ್ ಶಾಲಾ ಆಡಿಟೋರಿಯಂನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಪ್ರಥಮ ಬಾರಿಗೆ, ೮೦೦ಕ್ಕೂ ಹೆಚ್ಚು ನ್ಯೂ ಜೆರ್ಸಿ ಕನ್ನಡಿಗರು ಒಂದೆಡೆ ಸೇರಿ ಯುಗಾದಿ ಹಬ್ಬವನ್ನು ಆಚರಿಸಿದ್ದು.. ಒಂದು ಸಾಧನೆಯೇ ಸರಿ !!
ಪ್ರಾರ್ಥನೆ, ಗಣೇಶ ಪೂಜೆ, ಪಂಚಾಂಗ ಶ್ರವಣ, ಯುಗಾದಿಯ ಕಿರು ಪರಿಚಯ, ಒಂದು ಸುಂದರ ಯುಗಾದಿ ಹಬ್ಬಕ್ಕೆ ನಾಂದಿಯಾಯಿತು. ಬೃಂದಾವನ
ಕನ್ನಡ ಶಾಲೆಯ ಮಕ್ಕಳ - ಕಿತ್ತೂರು ಚೆನ್ನಮ್ಮ, ವಚನ ಸಾಹಿತ್ಯ, ದಾಸ ಸಾಹಿತ್ಯ, ನಗುವುದೋ ಅಳುವುದೋ..ಮತ್ತು ಇತರ ಸಂಸ್ಥೆಗಳ ನೂರಕ್ಕೂ ಹೆಚ್ಚು ಕನ್ನಡ ಮಕ್ಕಳ, ನೃತ್ಯ, ಮಾತು, ಅಭಿನಯ, ಹಾಡುಗಳು ಕಣ್ಣ ಮುಂದೆ ಕಟ್ಟಿದಂತಿವೆ. ಇವುಗಳೊಂದಿಗೆ ನಮ್ಮ ಸ್ಥಳೀಯ ಕನ್ನಡ ಕಲಾವಿದರ ಹಲವಾರು ಕಾರ್ಯಕ್ರಮಗಳು ಮನಸೂರೆಗೊಂಡವು.
ನಮ್ಮೆಲ್ಲರ ನೆಚ್ಚಿನ ನವರಸ ನಾಯಕ ನಟ ಶ್ರೀ ಜಗ್ಗೇಶ್ ರವರ ಮನರಂಜನೆ, ಅನುಭವದ ಮಾತು, ಮಿಮಿಕ್ರಿಗಳಿಗೆ ಪ್ರೇಕ್ಷಕರಿಂದ ಚಪ್ಪಾಳೆಗಳ ಸುರಿಮಳೆ. ಕರ್ನಾಟಕದ ಕೋಗಿಲೆ ಎಂದು ಪ್ರಖ್ಯಾತರಾಗಿರುವ ಶ್ರೀಮತಿ ಬಿ.ಆರ್. ಛಾಯಾರವರು, ಶ್ರೀ ಪದ್ಮಪಾಣಿಯವರೊಂದಿಗೆ ನೆಡೆಸಿಕೊಟ್ಟ ಸಂಗೀತ ಕಾರ್ಯಕ್ರಮ, ಅವರ " ಹಿಂದುಸ್ಥಾನವು ಎಂದೂ ಮರೆಯದ ...." ಎಂಬ ಹಾಡಿನಂತೆ ಎಂದಿಗೂ ಅಚ್ಚಳಿಯದೆ ನೆನಪಿನಲ್ಲಿ ಉಳಿಯುತು. ಇದರೊಂದಿಗೆ ತುಂಬಿದ ಸಭಾಂಗಣದಲ್ಲಿ ನಿಮ್ಮ ಉಪಸ್ಥಿತಿ, ಇಡೀ ಕಾರ್ಯಕ್ರಮದ ಜೀವಾಳವಾಗಿತ್ತು.
ಮಧ್ಯಾಹ್ನದ ಬೇವು ಬೆಲ್ಲ, ರಸಾಯನ, ಗೊಜ್ಜವಲಕ್ಕಿ ...ಸಂಜೆ ಮಕ್ಕಳಿಗಾಗಿ ಹುಟ್ಟು ಹಬ್ಬದ ಕೇಕ್, ಕಾಫಿ, ಸ್ನಾಕ್ಸ್.. ಸಂಜೆಯ ಹಬ್ಬದ ಊಟ...ದೊಡ್ಡ ಲಾಡು ಜೊತೆಗೆ ಗುಲಬರ್ಗಾದ ಸಜ್ಜೆ ರೊಟ್ಟಿ ಹಬ್ಬದೂಟಕ್ಕೆ ಮೆರಗು ಕೊಟ್ಟವು. 
ಒಟ್ಟಾರೆ ಬೃಂದಾವನ ಅಭಿಮಾನಿ ತಂಡದ ಈ ವಸಂತೋತ್ಸವ ಕಾರ್ಯಕ್ರಮ - ಯುಗಾದಿ ಹಬ್ಬ, ಎಂದೂ ಮರೆಯಲಾರದ ಅನುಭವ.. ೮೦೦ ಹೆಚ್ಚು ನ್ಯೂ ಜೆರ್ಸಿ ಕನ್ನಡಿಗರೆಲ್ಲ ಒಂದೆಡೆ ಸೇರಿ ಯುಗಾದಿ ಹಬ್ಬ ಆಚರಿಸಿದ್ದೀರಿ...ಈ ಕಾರ್ಯಕ್ರಮದ ಯಶಸ್ಸಿನ ಹಿಂದೆ ನೀವಿದ್ದೀರಿ, ನೂರಾರು ಸ್ವಯಂ ಕಾರ್ಯಕರ್ತರಿದ್ದೀರಿ, ಕಲಾವಿದರಿದ್ದೀರಿ, ಪ್ರಾಯೋಜಕರಿದ್ದೀರಿ, ನಿಮಗೆಲ್ಲ ಅಭಿಮಾನಿ ತಂಡದ ತುಂಬು ಹೃದಯದ ಕೃತಜ್ಞತೆಗಳು. ನಿಮಗಾಗಿ ಇನ್ನೂ ಉತ್ತಮ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ದಯವಿಟ್ಟು ನಿರೀಕ್ಷಿಸಿ ..ನಮ್ಮ ಮುಂದಿನ ಕಾರ್ಯಕ್ರಮ ಪಿಕ್

 

 

Copyright © Karnataka Cultural Organization - Brindavana ಬೃಂದಾವನ