ಮೈತ್ರಿ ಸಂದೇಶ

 ಸಂತೋಷ್ ಕುಮಾರ್ ಕಡ್ಲೆಬೇಳೆ

ತಾಯ್ನಾಡಿನಿಂದ ದೂರ,  ಸಪ್ತ ಸಾಗರಗಳನ್ನು ದಾಟಿ ಬಂದ ಕನ್ನಡಿಗರ ಬದುಕಿನಲ್ಲಿ, ಕಲೆ-ನೆಲ-ಜಲ-ಭಾಷೆ-ಬರಹ-ಸಂಸ್ಕ್ರತೀಯ ಬೇರುಗಳು ಕಳಚಿ ಜಾರದಂತೆ ಎಚ್ಛರಿಕೆ ವಹಿಸುವ, ಹಾಗೂ ಎರಡನೆಯ ಪೀಳಿಗೆಯ ಕನ್ನಡಿಗರು ಮತ್ತು ಅವರ ಮುಂದಿನ ಜನಾಂಗ ನಡುವೆ ಒಂದು ಸಂಪರ್ಕಕೊಂಡಿಯಾಗುವ ಉದ್ದೇಶದಿಂದಲೇ ಹುಟ್ಟಿಕೊಂಡ ಕರ್ನಾಟಕ ಕಲ್ಚರಲ್ ಆರ್ಗನೈಸೇಶನ್-ಬೃಂದಾವನ(ಕೆಸಿಒಬಿ), ಕಳೆದ ಎರಡು ವರ್ಷಗಳಲ್ಲಿ ಮಾಡಿದ ಸಾಧನೆಯ ಪಕ್ಷಿ ನೋಟವನ್ನು ತಮ್ಮ ಮುಂದಿಡಲು ಸಂತೋಷವೆನಿಸುತ್ತಿದೆ.

"ಮೊದಲು ಮಾನವನಾಗು" ಎಂಬ ಕವಿವಾಣಿಯೇ ಇಲ್ಲಿಯ ಕನ್ನಡಿಗರ ಬದುಕಿನ ಜೀವಾಳ, ಚಾರಿಟಿ ಎಂಬುದು ಅನುಕಂಪದ ತ್ಯಾಗವಾಗದೆ ಮಮತೆಯ ತ್ಯಾಗವಾಗಬೇಕೆಂದು ನಮ್ಮ ನಿಲುವು. ನಮ್ಮ ಚಟುವಟಿಕೆಗಳು ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳ ಮೂಲಕ ಈ ಧರ್ಮಕಾರ್ಯವನ್ನು ನಾವು ಮಾಡಿದ್ದೇವೆ. ಅದು ರೆಡ್ ಕ್ರಾಸ್, ಹೆಲ್ಪ್ ಫಂಡೇಶನ್, ಅಂಧ ಮಕ್ಕಳಿಗಾಗಿ ನಡೆಸಿದ ನಿಧಿ ಸಂಗ್ರಹ, ಬೆಂಗಳೂರಿನ ಸಮತರಣ ಅಥವಾ ಇನ್ಯಾವುದೇ ಸಂಸ್ಥೆಯ ಮೂಲಕ ಕೆಸಿಒಬಿ ಮಾಡಿದ ಸೇವೆಗಳಿರಬಹುದು. ಇದರಲ್ಲಿ ನಮ್ಮ ಮಕ್ಕಳು ಸಹ ಭಾಗವಹಿಸಿರುವುದು ಅವರಲ್ಲಿ ಮೂಡಿದ ಸಮಾಜಿಕ ಜವಾಬ್ದಾರಿಗೊಂದು ನಿದರ್ಶನ.

To read more 

ಮೈತ್ರಿ ತಂಡ /  Mytri Tanda

 

Copyright © Karnataka Cultural Organization - Brindavana ಬೃಂದಾವನ