ಅಧ್ಯಕ್ಷರ ಸಂದೇಶ

ನ್ಯೂ ಜೆರ್ಸಿ ಮತ್ತು ವಿಶ್ವದೆಲ್ಲದೆ ಹರಡಿರುವ ಕನ್ನಡ ಬಾಂಧವರಿಗೆ ಶುಭಾಶಯಗಳು !

ಹೌದು ನಮ್ಮ ಬೃಂದಾವನ ವಾಣಿ ಈಗ ನ್ಯೂ ಜೆರ್ಸಿ ಅಲ್ಲದೆ ವಿಶ್ವದೆಲ್ಲೆಡೆ ಹರಡಿದೆ, ಅಮೆರಿಕಾದ ಹಲವಾರು ರಾಜ್ಯ, ಯುರೋಪ್, 

ಮಿಡ್ಲ್ ಈಸ್ಟ್ ದಶಗಳಲ್ಲದೆ ಕರ್ನಾಟಕ ಮತ್ತು ಭಾರತದ ಎಲ್ಲೆಡೆ ನಮ್ಮ ಕನ್ನಡ ಸಹೃದಯರು ಬೃಂದಾವನ ವಾಣಿಯ 

ಓದುಗರಾಗಿದ್ದರೆ, ಒಂದು ರೀತಿಯಲ್ಲಿ ವಿಶ್ವ  ವಾಣಿಯಾಗಿದೆ, ಈ-ಪತ್ರಿಕೆ ಮಾಡಿದ ಒಂದು ಪವಾಡ!

ಜನುವರಿ ಕೊನೆಗೆ ಚಳಿ ನ್ಯೂ ಜೆರ್ಸಿಗೆ ಬಡಿಯಿತು, ಜೋನಾಸ್ ೨ ಅಡಿಗೂ ಹೆಚ್ಚು ಹಿಮ ಸುರಿಸಿ ನ್ಯೂ ಜೆರ್ಸೆಯಲ್ಲಿ ಎಮರ್ಜೆನ್ಸಿ 

ವಾತಾವರಣ ಸೃಷ್ಟಿಸಿತು, ಮಂಜು, ಚಳಿ ಕಳೆದು, ವಸಂತ ಋತುವಿನ ಆಗಮನಕ್ಕಾಗಿ ಬೃಂದಾವನ ಮಿಲನ ತಂಡ ಸಿದ್ಧವಾಗುತ್ತಿದೆ! 

ಏಪ್ರಿಲ್ ೯ ವಸಂತೋತ್ಸವಕ್ಕೆ ಸಿದ್ದತೆ ನಡೆಯುತ್ತಿದೆ.  ಬೃಂದಾವನ 'ಮಿಲನ' ತಂಡದ ಎರೆಡನೆ ವರುಷ ಕಾರ್ಯಕ್ರಮಗಳು ಬರದಿಂದ 

ಶುರುವಾಗಿದೆ!

ಈಸ್ಟ್ ವಿಂಡ್ಸರ್ ಲೈಬ್ರರಿಯಲ್ಲಿ ಜ-9 ರಂದು ಎರೆಡನೆ ಕನ್ನಡ ಶಾಲೆ ಶುರುವಾಗಿದೆ ಎಂದು ತಿಳಿಸಲು ಹರ್ಷವಾಗಿದೆ, ನ್ಯೂ 

ಜೆರ್ಸಿಯಲ್ಲಿ ಕನ್ನಡ ಶಾಲೆ ಬೃಂದಾವನ ‘ಮಿಲನ ‘ ತಂಡದ ದೊಡ್ಡ ಕನಸು, ನಮ್ಮ ಕನ್ನಡದ ಕಂದಮ್ಮಗಳಿಗೆ ನವೀನ ರೀತಿಗಳಲ್ಲಿ, 

ಕನ್ನಡ ಸರಿಯಾಗಿ ಮಾತಾಡಲು, ಓದಲು, ಬರೆಯಲು ತಯಾರು ಮಾಡಬೇಕೆಂಬ ಉದ್ದೇಶದಿಂದ ಶುರುವಾದ ಸೌತ್ ಬ್ರುನ್ಸ್ವಿಕ್ಕ್ 

ಮತ್ತು ಈಸ್ಟ್ ವಿಂಡ್ಸರ್ ಶಾಲೆಯಲ್ಲಿ ಈಗ 60 ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ, ಇನ್ನು ಹೆಚ್ಚು ಶಾಲೆ ತೆರೆಯಬೇಕೆಂಬ ಉತ್ಸಾಹ 

ನಮ್ಮ ಶಾಲೆಯ ಸ್ವಯಂ ಸೇವಕರುಗಳು ಹೊಂದಿದ್ದಾರೆ. ಸ್ವಯಂ ಸೇವಕರ ಈ ಉತ್ಸಾಹಕ್ಕೆ ಬೃಂದಾವನ ಚಿರ ಋಣಿ.

ಕನ್ನಡ ಶಾಲೆಗಳ ಈ ಕನಸನ್ನು ನನಸು ಮಾಡಲು ನಮಗೆ ನಿಮ್ಮ ಡೊನೇಷನ್ ಅತ್ಯವಶ್ಯಕ, ಆನ್ಲೈನ್ ಮಾಡಬಹದು  

www.brindavana.org, ಗೆ ಹೋಗಿ ಬಲ ಬಾಗದಲ್ಲಿ Donate-Kannada Shaale @ 

Brindavana ಕ್ಲಿಕ್ಕಿಸಿ, ವಿವರಗಳನ್ನ ನೀಡಿ ಕ್ಲಿಕ್ಕಿಸಿ ಕ್ಷಣಾರ್ಧದಲ್ಲಿ ನಿಮಗೆ ಇ-ಮೇಲ್ ಮುಖೇನ ಚೀಟಿ ದೊರೆಯುವುದು ನಿಮ್ಮ ಈ 

ಕಾಣಿಕೆ ೧೦೦% ಟ್ಯಾಕ್ಸ್ ರಹಿತ . ನಮ್ಮನ್ನ ಪ್ರೋತ್ಸಾಹಿಸಿ.

ಅಕ್ಕ - ವಿಶ್ವ ಕನ್ನಡ ಸಮ್ಮೇಳನ - ಅಟ್ಲಾಂಟಿಕ್ ಸಿಟಿ, ನ್ಯೂ ಜೆರ್ಸೆಯಲ್ಲಿ Sept - 2, 3 & 4 ರಂದು ಎಲ್ಲ ಕನ್ನಡ ಸಂಘಗಳ 

ಸಹಯೋಗದೊಂದಿಗೆ ನಡೆಯುತ್ತದೆ ಎಂದು ಅಕ್ಕ ಅಧ್ಯಕ್ಷ ರಾಜ್ ಪಾಟಿಲ್ ಅವರು ಘೋಷಿಸಿದ್ದಾರೆ, ಬೃಂದಾವನ ಅಲ್ಲದೆ ನಮ್ಮ 

ಸುತ್ತ ಮುತ್ತಲಿನ ಕನ್ನಡ ಸಂಘದ ಕನ್ನಡಿಗರು ಈ ದೊಡ್ಡ ಕನ್ನಡದ ಹಬ್ಬಕ್ಕೆ ಹೆಗಲು ಕೊಡಲು ಸಿದ್ದರಾಗುತ್ತಿದ್ದಾರೆ. 

ಬೃಂದಾವನ ಕಾರ್ಯಕ್ರಮಗಳ ಜೊತೆ ಅಕ್ಕ ಕಾರ್ಯಕ್ರಮಗಳು ಸೇರಿಸಿದರೆ ಈ ವರುಷ ಪೂರ್ಣ ಕನ್ನಡ ಚಟುವಟಿಕೆಗಳ ಬಿಸಿ 

ಆರುವುದೇ ಇಲ್ಲ. ಒಟ್ಟಿನಲ್ಲಿ ನ್ಯೂ ಜೆರ್ಸಿಯಲ್ಲಿ 2016 ಕನ್ನಡ ಪ್ರೇಮಿಗಳಿಗೆ ಸುಗ್ಗಿ ತರುವುದಂತೂ ಖಂಡಿತ.

ಮಲ್ಲಿಕ್ ಪ್ರಸಾದ್ 

ಅಧ್ಯಕ್ಷರು, ಬೃಂದಾವನ

 ​​​

Copyright © Karnataka Cultural Organization - Brindavana ಬೃಂದಾವನ