ಮುಖ್ಯಮಂತ್ರಿ ಚಂದ್ರು ಅವರಿಂದ ಕಾರ್ಯಕ್ರಮ ಉದ್ಘಾಟನೆ

 ಬೃಂದಾವನ ಕನ್ನಡ ಕಳಿಸೋಣ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ  Dr. Ashok Kattimani - (848)248 9697 or -kannadakalisona@brindavana.org

 More info on Brindavana Kannada Kalisona: Reach Dr. Ashok Kattimani - (848)248 9697 or -kannadakalisona@brindavana.org

 

ಬೃಂದಾವನ ಕನ್ನಡ ಕಲಿಸೋಣ

ಕಾರ್ಯಕ್ರಮದ ಉದ್ದೇಶ

ಕನ್ನಡ ಕಲಿಸಲು, ಉಳಿಸಲು, ಬೆಳೆಸಲು ಕನ್ನಡಿಗರಾದ ನಾವೆಲ್ಲ ಪಣ ತೊಡಬೇಕಿದೆ. ಈ ದಿಸೆಯಲ್ಲಿ  ಬೃಂದಾವನ ಮಿಲನ ತಂಡದ ಒಂದು ಹೆಜ್ಜೆ  ಕನ್ನಡ ಕಲಿಸೋಣ.

ನಮ್ಮ ಮಕ್ಕಳಲ್ಲಿ, ಯುವ ಜನರಲ್ಲಿ ಕನ್ನಡ ಭಾಷೆಯ ಬಗ್ಗೆ ಅರಿವು, ಅಭಿಮಾನ ಮಾಡಿಸಿ, ಆಸಕ್ತಿಯನ್ನ ಹೆಚ್ಚಿಸಿ, ಕನ್ನಡದಲ್ಲಿ ಮಾತನಾಡುವಂತೆ, ಓದಿ ಬರೆಯುವಂತೆ ಸಜ್ಜುಗೂಳಿಸಿ, ಅವರೂ ಸಹ ನಮ್ಮೊಡನೆ ಕನ್ನಡವನ್ನ ಸವಿಯುವಂತೆ ಮಾಡುವುದೇ ಬೃಂದಾವನ ಕನ್ನಡ ಕಲಿಸೋಣ ಕಾರ್ಯಕ್ರಮದ ಪ್ರಮುಖ ಉದ್ದೇಶ.

ನಮ್ಮ ಹಲವಾರು ಕನ್ನಡ ಕಲಿಕಾ ಕೇಂದ್ರಗಳು ಮತ್ತು ಇತರ ಕನ್ನಡ ಸಂಘಗಳ ಸಹಯೋಗದೊಂದಿಗೆ ಈ ಕನ್ನಡ ಕಲಿಕೆಯನ್ನ ಹೆಚ್ಚು, ಹೆಚ್ಚು ಜನಪ್ರಿಯಗೊಳಿಸಲು ಶ್ರಮಿಸುತ್ತೇವೆ.

ಕನ್ನಡ ಕಲಿಸುವ ಜವಾಬ್ದಾರಿ ಕನ್ನಡಿಗರಾದ ನಮ್ಮೆಲ್ಲರದು.

“ಬೃಂದಾವನ ಕನ್ನಡ ಕಲಿಸೋಣ” - ಕನ್ನಡ ಕಲಿಸುವ ವಿಧಾನ

ವಾರದಲ್ಲಿ ಒಂದು ದಿವಸ, ನಿಗದಿತ ಸ್ಥಳ - ಸಮಯದಲ್ಲಿ, ನಿರ್ದಿಷ್ಟ ಪಠ್ಯಕ್ರಮದಂತೆ ಕನ್ನಡ ಮಾತನಾಡಲು, ಓದಲು, ಬರೆಯಲು ಕಲಿಸುವುದು.

ಹೊಸ ಶಬ್ದ, ಹೊಸ ಹಾಡು, ಹೊಸ ಕಥೆಗಳೇ ಈ ಕಲಿಕೆಯ ವಿಧಾನದ ಜೀವಾಳ.

ಕಡ್ಡಾಯವಾಗಿ ಕನ್ನಡ ಬರಹವನ್ನ ಇಂಗ್ಲಿಷ್ ಲಿಪಿಯಲ್ಲಿ ಬರೆಯುವುದನ್ನ ತಪ್ಪಿಸಿ, ನಮ್ಮ ಸುಂದರ ಕನ್ನಡ ಲಿಪಿಯನ್ನೇ ಬಳಸಲು ಕಲಿಸುವುದು.

ಕನ್ನಡದ ಉಚ್ಛಾರವನ್ನ ಮನನ ಮಾಡಿಸಿ ಕನ್ನಡವನ್ನ ಕನ್ನಡದಂತೆ ಮಾತನಾಡಲು ಕಲಿಸುವುದು.

ಇಂದಿನ ಇಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಕಥೆ, ನಾಟಕ, ಪದ್ಯಗಳನ್ನ ಹೆಚ್ಚು ಹೆಚ್ಚು ಕೇಳಿಸಿ, ಕನ್ನಡದ ಬಗ್ಗೆ ಆಸಕ್ತಿ ಮೂಡುವಂತೆ ಮಾಡುವುದು.

ಬೃಂದಾವನದ ಕನ್ನಡ ಚಟುವಟಿಕೆಗಳಾದ - ನೃತ್ಯ, ನಾಟಕಗಳಲ್ಲಿ ಭಾಗವಹಿಸುವಂತೆ ವೇದಿಕೆ ನಿರ್ಮಿಸುವುದು.

“ಬೃಂದಾವನ ಕನ್ನಡ ಕಲಿಸೋಣ” – ಪಠ್ಯಕ್ರಮ

ಕನ್ನಡ ಕಲಿಸೋಣ ಕಾರ್ಯಕ್ರಮದ ಪಠ್ಯಕ್ರಮ ಕರ್ನಾಟಕ ಸರಕಾರದ ಪಠ್ಯಕ್ರಮಕ್ಕೆ ಪೂರಕವಾಗಿರುತ್ತದೆ.

ಅಚ್ಚ ಕನ್ನಡದಲ್ಲಿ ಮಾತನಾಡಲು ಕಲಿಸುವದಕ್ಕೆ ಮೊದಲ ಆದ್ಯತೆ.

ಅಕ್ಷರಾಭ್ಯಾಸದೊಂದಿಗೆ ಪ್ರಾರಂಭಿಸಿ, ಶಬ್ದ, ವಾಕ್ಯ, ಗದ್ಯ ಬರೆಯಲು ಸಿದ್ದಗೊಳಿಸುವುದು ಈ ಪಠ್ಯಕ್ರಮದ ಗುರಿ.

ಪ್ರತಿ ತರಗತಿಯಲ್ಲಿ, ಕನ್ನಡದಲ್ಲಿಯೇ ಮಾತುಕತೆ, ಪ್ರಾರ್ಥನೆ, ಓದುವುದು, ಬರವಣಿಗೆ, ಕನ್ನಡದ ಹಾಡುಗಳು, ಕನ್ನಡ ಭಾಷೆ, ನಾಡಿನ ಬಗ್ಗೆ ಅರಿವು ಮೂಡಿಸುವುದು.

 

“ಬೃಂದಾವನ ಕನ್ನಡ ಕಲಿಸೋಣ” – ಪಠ್ಯಕ್ರಮ

ಕನ್ನಡ ಕಲಿಸೋಣ ಕಾರ್ಯಕ್ರಮದ - ಕನ್ನಡ ಕಲಿಸುವ ಪಠ್ಯಕ್ರಮ ಕರ್ನಾಟಕ ಸರಕಾರದ ಕನ್ನಡ ಪಠ್ಯಕ್ರಮಕ್ಕೆ ಪೂರಕವಾಗಿರುತ್ತದೆ.

ಅಚ್ಚ ಕನ್ನಡ ಮಾತನಾಡಲು ಕಲಿಸುವದಕ್ಕೆ ಮೊದಲ ಆದ್ಯತೆ.

ಅಕ್ಷರಾಭ್ಯಸದೊಂದಿಗೆ ಪ್ರಾರಂಭಿಸಿ, ಶಬ್ದ. ವಾಕ್ಯ, ಗದ್ಯ ಬರೆಯಲು ಸಿಧ್ದ್ಧಗೂಳಿಸುವುದು ಈ ಪಠ್ಯಕ್ರಮದ ಗುರಿ.

ಪ್ರತಿಯೊಂದು ತರಗತಿಯಲ್ಲಿ, ಕನ್ನಡದಲ್ಲಿ ಮಾತುಕತೆ, ಪ್ರಾರ್ಥನೆ, ಓದುವುದು, ಬರವಣಿಗೆ, ಕನ್ನಡದ ಹಾಡುಗಳು, ಕನ್ನಡ ಭಾಷೆ, ನಾಡಿನ ಬಗ್ಗೆ ಅರಿವು ಮೂಡಿಸುವುದು.

“ಬೃಂದಾವನ ಕನ್ನಡ ಕಲಿಸೋಣ” ಕನ್ನಡ ಕಲಿಸೋಣ ಕೇಂದ್ರ

ನಿಮ್ಮ ಸಹಕಾರದೊಂದಿಗೆ ಮಿಲನ ತಂಡ, ನ್ಯೂ ಜೆರ್ಸಿಯ ಐದು ಸ್ಥಳಗಳಲ್ಲಿ ಕನ್ನಡ ಕಲಿಸೋಣ ಕಾರ್ಯಕ್ರಮವನ್ನ ಹಮ್ಮಿ ಕೊಳ್ಳಲು ಉದ್ದೇಶಿಸಿದೆ. ಮೊದಲ ಕೇಂದ್ರವನ್ನ ಜುಲೈ/ ಅಗಸ್ಟ್ ತಿಂಗಳ ಮೊದಲ ವಾರದಲ್ಲಿ ಎಡಿಸನ್ ನಲ್ಲಿ ಪ್ರಾರಂಭಿಸುತ್ತಿದ್ದೇವೆ.

“ಬೃಂದಾವನ ಕನ್ನಡ ಕಲಿಸೋಣ” ಮೌಲ್ಯಮಾಪನ ಮತ್ತು ಪ್ರಮಾಣ ಪತ್ರ.

ಹಂತ ಹಂತವಾಗಿ ಪ್ರಗತಿಯ ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳನ್ನ ಮುಂದಿನ ಹಂತಕ್ಕೆ ತೇರ್ಗಡೆಗೊಳಿಸಲಾಗುತ್ತದೆ. ಅರ್ಹ ವಿದ್ಯಾರ್ಥಿಗಳಿಗೆ ಬೃಂದಾವನದ ಕಾರ್ಯಕ್ರಮಗಳಲ್ಲಿ ಪ್ರಮಾಣ ಪತ್ರ ನೀಡಲಾಗುತ್ತದೆ

ಕನ್ನಡ ಭಾಷೆಗೆ – ‘ಭಾಷೆ’

ನಮ್ಮ ಮಕ್ಕಳಿಗೆ ಕನ್ನಡ ಕಲಿಸುವ ಜವಾಬ್ದಾರಿ ಪೋಷಕರಾದ ನಮ್ಮ ಮೇಲಿದೆ.

ಮನೆಯಲ್ಲಿ ತಪ್ಪದೇ ಕನ್ನಡದಲ್ಲಿಯೇ ಮಾತನಾಡುತ್ತೇವೆ. “ ಕನ್ನಡ ಅರ್ಥವಾಗುತ್ತದೆ, ಮಾತನಾಡುವುದಿಲ್ಲ”  ಎಂಬ ಸಮಜಾಯಿಷಿ ಕೊಡದೆ ಮಕ್ಕಳು ಅಚ್ಚ ಕನ್ನಡದಲ್ಲಿ ಮಾತನಾಡುವಂತೆ ಉತ್ತೇಜಿಸುತ್ತೇವೆ.

ವಾರದಲ್ಲಿ ಐದು ದಿನ, ೧೦ – ೧೫ ನಿಮಿಷ ಕನ್ನಡದ ಚಟುವಟಿಕೆಗಳನ್ನು ಅಭ್ಯಾಸ ಮಾಡಿಸುತ್ತೇವೆ.

ಇಬ್ಬರು ಕನ್ನಡಿಗರು ಸೇರಿದಾಗ ಕನ್ನಡದಲ್ಲೇ ಮಾತನಾಡುತ್ತೇವೆ. ಇಂಗ್ಲಿಷ್ ಮಿಶ್ರಿತ ಕನ್ನಡವಲ್ಲದೆ ಸ್ವಚ್ಚ ಕನ್ನಡದಲ್ಲಿ ಮಾತನಾಡುತ್ತೇವೆ.

ಆದಷ್ಟು ಕನ್ನಡ ಪುಸ್ತಕ, ಕಥೆ ಕಲಿಯಲು, ಚಲನ ಚಿತ್ರ ನೋಡಲು ಅವಕಾಶ ಕಲ್ಪಿಸಿ, ಮಕ್ಕಳಿಗೆ ಕನ್ನಡದಲ್ಲಿ ಆಸಕ್ತಿ ಮೂಡಿಸುತ್ತೇವೆ.

 

ನಮ್ಮ ಕೋರಿಕೆ

ನಿಮ್ಮ ಮಕ್ಕಳನ್ನ ಕನ್ನಡ ಕಲಿಸೋಣ ಕಾರ್ಯಕ್ರಮಕ್ಕೆ ನೊಂದಾಯಿಸಿ.

ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಕನ್ನಡ ಕಲಿಸುವ ಇಚ್ಹೆಯಿದ್ದಲ್ಲಿ ದಯವಿಟ್ಟು ನಮ್ಮನ್ನ ಸಂಪರ್ಕಿಸಿ

ನಿಮ್ಮ ಉದಾರ ಕೊಡುಗೆ ಈ ಕಾರ್ಯಕ್ರಮವನ್ನ ಯಶಸ್ಸಿಯಾಗಿಸಲು ಸಹಾಯವಾಗುತ್ತದೆ.

Copyright © Karnataka Cultural Organization - Brindavana ಬೃಂದಾವನ