ಅಧ್ಯಕ್ಷರ ಸಂದೇಶ

ಆತ್ಮೀಯ ಕನ್ನಡ ಸ್ನೇಹಿತರೆ,
 
ಪ್ರೇಮಪೂರ್ವಕ ವಂದನೆಗಳು.
 
ನ್ಯೂ ಜೆರ್ಸಿ ಬೃಂದಾವನ ಕನ್ನಡ ಕೂಟವನ್ನು ಮುಂದಿನ ಎರಡು ವರ್ಷ, ನೆಡೆಸಿಕೊಂಡು ಹೋಗುವ ಜವಾಬ್ದಾರಿ ಅಭಿಮಾನಿ ತಂಡಕ್ಕೆ ನೀಡಿದ್ದೀರಿ. ನಿಮಗೆಲ್ಲ ನಾವು ಅತ್ಯಂತ ಆಭಾರಿ.
 
ಅಭಿಮಾನಿ ತಂಡದ ಉತ್ಸಾಹಿ ನಿರ್ದೇಶಕರೆಲ್ಲ ಸೇರಿ ೨೦೦೭ರ ಸಾಂಸ್ಕೃತಿಕ ಚಟುವಟಿಕೆಗಳನ್ನ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಯೋಜಿಸಿದ್ದೇವೆ. ನಮ್ಮ ಮೊಟ್ಟ ಮೊದಲ ಕಾರ್ಯಕ್ರಮ ವಸಂತೋತ್ಸವ. ಯುಗಾದಿ ಹಬ್ಬದ ಈ ಕಾರ್ಯಕ್ರಮನ್ನು ಏಪ್ರಿಲ್ ೮ ರಂದು ಹೈಸ್ಟೌನ್ ಶಾಲೆಯ ಆಡಿಟೋರಿಯಂನಲ್ಲಿ ಏರ್ಪಡಿಸಿದ್ದೇವೆ. ಈ ಕಾರ್ಯಕ್ರಮದಲ್ಲಿ ನಮ್ಮ ನವರಸ ನಾಯಕ ನಟ ಶ್ರೀ ಜಗ್ಗೇಶ್ ಮತ್ತು ಕರ್ನಾಟಕ ಕೋಗಿಲೆ ಶ್ರೀಮತಿ ಬಿ.ರ್. ಛಾಯ ನಮ್ಮೊಂದಿಗಿರುತ್ತಾರೆ. ನಕ್ಕು ನಗಿಸುವ ಹಾಸ್ಯ, ಇಂಪಾದ ಕನ್ನಡ ಹಾಡು, ಸುಂದರ ಸಾಂಸ್ಕೃತಿಕ ಕಾರ್ಯಕ್ರಮಗಳೆನ್ನು ಅನುಭವಿಸುವದರ ಜೊತೆಗೆ, ನಾವೆಲ್ಲ ಒಟ್ಟಿಗೆ ಸೇರಿ ರುಚಿಕರವಾದ ಹಬ್ಬದೂಟ ಮಾಡೋಣ. ಅರ್ಲಿ ಬರ್ಡ್ ಆಫರ್ ಮುಗಿಯುವದರೊಳಗೆ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಿ.
 
ಇದರೊಂದಿಗೆ ನಮ್ಮ ಮುಂದಿನ ಕಾರ್ಯಕ್ರಮಗಳಾದ ಪಿಕ್ನಿಕ್ ಮತ್ತು ಗಣೇಶ ಹಬ್ಬಗಳನ್ನು ವಿಶೇಷವಾಗಿ ಆಚರಿಸಲು ರೂಪರೇಷೆ ಹಾಕಿಕೊಳ್ಳುತ್ತಿದ್ದೇವೆ. ನಮ್ಮ ಎಲ್ಲ ಕಾರ್ಯಗಳ ಹಿಂದೆ ನಿಮ್ಮ ಸಲಹೆ ಸಹಕಾರಗಳು, ನೀವು, ನಮ್ಮೊಂದಿಗಿದ್ದಿರಿ.
 
ಇದೆ ತಿಂಗಳು ಮಾರ್ಚ್ ೧೫ ರಂದು ಬೃಂದಾವನ  ವಾಣಿ ಬಿಡುಗಡೆಯಾಗಲಿದೆ. ಯುಗಾದಿ ಹಬ್ಬದ ಈ ವಿಶೇಷ ಸಂಚಿಕೆಯನ್ನು ಓದಲು ಮರೆಯದಿರಿ.
 
ಶುಭ ಹಾರೈಕೆಗಳೊಂದಿಗೆ.
 
ತಮ್ಮ ಆತ್ಮೀಯ
ಡಾ. ಅಶೋಕ್ ಕಟ್ಟಿಮನಿ

 ​​​

Copyright © Karnataka Cultural Organization - Brindavana ಬೃಂದಾವನ